'ಹರಿಪ್ರಸಾದ್ ಮೆಂಟಲ್ ಆಗಿರಬಹುದು...!'
‘’
‘ಮೊದಲು ಕನ್ನಡ ಕಲಿತು ನನ್ನ ಪತ್ರ ಓದಲಿ; ಬಳಿಕ ಆರೋಪ ಮಾಡಲಿ’—ಅಭಯ ಪಾಟೀಲ ತಿರುಗೇಟು
ಬೆಳಗಾವಿ:
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ವಿವಾದ ಇದೀಗ ವೈಯಕ್ತಿಕ ವಾಗ್ದಾಳಿಗೆ ತಿರುಗಿದೆ. ‘ಬಿ.ಕೆ. ಹರಿಪ್ರಸಾದ್ ಅವರು ಅಧ್ಯಕ್ಷರಾದ ಬಳಿಕ ಮೆಂಟಲ್ ಆಗಿರಬಹುದು; ವಯಸ್ಸಾದಂತೆ ಸಮಸ್ಯೆ ಹೆಚ್ಚಾಗಿರಬಹುದು’ ಎಂದು ಶಾಸಕ ಅಭಯ ಪಾಟೀಲ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕ್ಷೇತ್ರದ ಸುಮಾರು 2,700 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಲು ಒತ್ತಡ ಹೇರಿದ್ದಾರೆ ಎಂಬ ಹರಿಪ್ರಸಾದ್ ಆರೋಪಕ್ಕೆ ದಾಖಲೆಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ‘ನನ್ನ ಕನ್ನಡ ಪತ್ರವನ್ನು ಸರಿಯಾಗಿ ಓದದೆ, ಅದರ ಅರ್ಥವನ್ನೇ ತಿರುಚಿದ್ದಾರೆ.

ಮೊದಲು ಕನ್ನಡ ಕಲಿತು ಪತ್ರ ಓದಲಿ; ಸ್ವಲ್ಪ ವಿಶ್ರಾಂತಿ ಪಡೆದು ವಾಸ್ತವ ಅರಿತ ಬಳಿಕ ಸುದ್ದಿಗೋಷ್ಠಿ ನಡೆಸಲಿ’ ಎಂದು ತಿರುಗೇಟು ನೀಡಿದರು.
‘ನನ್ನ ಪತ್ರದಲ್ಲಿ ರೋಹಿಂಗ್ಯಾ, ಪಾಕಿಸ್ತಾನಿ, ಬಾಂಗ್ಲಾದೇಶಿ, ಮುಸ್ಲಿಂ ಅಥವಾ ಅಲ್ಪಸಂಖ್ಯಾತ ಎಂಬ ಉಲ್ಲೇಖವೇ ಇಲ್ಲ. ಆದರೂ ಹರಿಪ್ರಸಾದ್ ಪ್ರಚಾರಕ್ಕಾಗಿ ಪತ್ರದಲ್ಲಿಲ್ಲದ ವಿಷಯಗಳನ್ನು ಸೇರಿಸಿ ಸುಳ್ಳು ಕಥೆ ಕಟ್ಟಿದ್ದಾರೆ’ ಎಂದು ಆರೋಪಿಸಿದರು.
‘ನಾನು ಶಾಸಕನಾಗಿ ಅಲ್ಲ, ಕ್ಷೇತ್ರದ ಬಿಎಲ್‌ಎ–1 ಆಗಿ ಮನವಿ ಸಲ್ಲಿಸಿದ್ದೇನೆ. ಬೂತ್ ಮಟ್ಟದ ಏಜೆಂಟ್‌ಗಳು ಎರಡು–ಮೂರು ಬಾರಿ ಭೇಟಿ ನೀಡಿದರೂ ಕೆಲವು ಮತದಾರರು ದಾಖಲಿತ ವಿಳಾಸಗಳಲ್ಲಿ ಪತ್ತೆಯಾಗಿಲ್ಲ. ಅಂತಹ ಹೆಸರುಗಳಿಗೆ ಫಾರ್ಮ್–7 ಮೂಲಕ ಆಕ್ಷೇಪ ಸಲ್ಲಿಸಿ, ಪರಿಶೀಲನೆಯ ನಂತರ ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆ ಕೇಳಿದ್ದೇನೆ. ಯಾರ ಹೆಸರನ್ನೂ ನೇರವಾಗಿ ಅಳಿಸಲು ಹೇಳಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಒಂದೇ ಮನೆಯಲ್ಲಿ 50 ಮತದಾರರಿದ್ದರೆ ಅನುಮಾನ ಮೂಡುವುದಿಲ್ಲವೇ? ಒಂದು ಬೂತ್‌ನ 18 ಹೆಸರುಗಳನ್ನು ಪರಿಶೀಲಿಸಿದಾಗ ಎಂಟು ಮಂದಿ ವಿಳಾಸದಲ್ಲೇ ಇರಲಿಲ್ಲ. ಮೃತರ ಹೆಸರುಗಳೂ ಕರಡು ಪಟ್ಟಿಯಲ್ಲಿ ಉಳಿದಿವೆ. ಇಂತಹ ಲೋಪಗಳನ್ನು ಪ್ರಶ್ನಿಸುವುದು ಅಪರಾಧವೇ?’ ಎಂದು ಕೇಳಿದರು.

ಅಭಯ ಪಾಟೀಲಗೆ ಆತ್ಮೀಯ ಸನ್ಮಾನ
---
‘ಹರಿಪ್ರಸಾದ್ ಹಿರಿಯ ರಾಜಕಾರಣಿ. ದಾಖಲೆ ಓದದೆ ಆರೋಪ ಮಾಡಿ, ರಾಜಕೀಯ ಪ್ರಚಾರಕ್ಕಾಗಿ ವಾಸ್ತವವನ್ನು ಬಲಿಕೊಡುವುದು ಅವರಿಗೆ ಶೋಭೆಯಲ್ಲ’ ಎಂದರು.




Comments