;
top of page

ರೈತ ಸಾವು’ ವದಂತಿ: ಇನ್‌ಸ್ಟಾಗ್ರಾಂ ವಿಡಿಯೊಗೆ ಕೇಸ್‌

Writer: vilas joshi
vilas joshi
3 hours ago
1 min read

ಬೆಳಗಾವಿಯ ‘ಜೈಲ್‌ ಭರೋ’ ಪ್ರತಿಭಟನೆ ವೇಳೆ ಸುಳ್ಳು ಸುದ್ದಿ ಹಬ್ಬಿಸಿದ ಆರೋಪ |


ಅಮಿತ್‌ ರಾಠೋಡ ವಿರುದ್ಧ ಪ್ರಕರಣ



ಬೆಳಗಾವಿ:

ರೈತರ ‘ಜೈಲ್‌ ಭರೋ’ ಪ್ರತಿಭಟನೆ ವೇಳೆ ರೈತರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಇನ್‌ಸ್ಟಾಗ್ರಾಂನಲ್ಲಿ ಸುಳ್ಳು ಸುದ್ದಿ ಹರಡಿದ ಆರೋಪದ ಮೇಲೆ ಅಮಿತ್‌ ರಾಠೋಡ ವಿರುದ್ಧ ನಗರದ ಎಪಿಎಂಸಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.



ನವೆಂಬರ್‌ 5ರಂದು ‘ಜೈಲ್‌ ಭರೋ’ ಕರೆಗೆ ಓಗೊಟ್ಟು ರೈತರು ನಗರದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಆ ವೇಳೆ ರೈತರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ಹೇಳುವ ಸೆಲ್ಫಿ ವಿಡಿಯೊವನ್ನು ರಾಠೋಡ ತಮ್ಮ ammu_vlog18 ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಿದ್ದರು ಎಂದು ನಗರ ಪೊಲೀಸ್‌ ಆಯುಕ್ತರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.



ಪ್ರತಿಭಟನೆ ವೇಳೆ ಹೃದಯಾಘಾತದಿಂದ ಯಾವುದೇ ರೈತ ಮೃತಪಟ್ಟಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ವಿಡಿಯೊ ಮೂಲಕ ರೈತರಿಗೆ ಪ್ರಚೋದನೆ ನೀಡಿ, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕದಡಲು ಯತ್ನಿಸಲಾಗಿದೆ ಎಂಬುದು ಪೊಲೀಸರ ಆರೋಪ. ಭಾರತೀಯ ನ್ಯಾಯ ಸಂಹಿತೆಯ ಕಲಂ 192ರ ಅಡಿ ಎಪಿಎಂಸಿ ಠಾಣೆಯಲ್ಲಿ ಪ್ರಕರಣ (ಸಂ. 175/2026) ದಾಖಲಿಸಲಾಗಿದೆ.


*ವದಂತಿ ಹರಡಿದರೆ ಕಠಿಣ ಕ್ರಮ*


ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸರು ಎಚ್ಚರಿಸಿದ್ದಾರೆ. ಇಂತಹ ಪೋಸ್ಟ್‌ಗಳು ಗಮನಕ್ಕೆ ಬಂದರೆ ತಕ್ಷಣ 112ಕ್ಕೆ ಕರೆ ಮಾಡಿ ಅಥವಾ ಸಮೀಪದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ

 
 
 

Comments


bottom of page