;
top of page

ಶಾಂತಾಯಿ ವೃದ್ಧಾಶ್ರಮದ ಸಿಇಒ ಆಗಿ ಮಾರಿಯಾ ವಿಜಯ ಮೋರೆ ನೇಮಕ

Writer: vilas joshi
vilas joshi
13 minutes ago
1 min read

ಬೆಳಗಾವಿ:

ಇಲ್ಲಿನ ಶಾಂತಾಯಿ ವೃದ್ಧಾಶ್ರಮದ ಸಿಇಒ ಆಗಿ) ಮಾರಿಯಾ ವಿಜಯ ಮೋರೆ ಅವರನ್ನು ನಿರ್ದೇಶಕ ಮಂಡಳಿ ಸರ್ವಾನುಮತದಿಂದ ನೇಮಿಸಿದೆ.

ಸಂಸ್ಥೆಯ ಅಧ್ಯಕ್ಷ ವಿಜಯ ಪಾಟೀಲ ಮತ್ತು ಕಾರ್ಯಾಧ್ಯಕ್ಷ ವಿಜಯ ಮೋರೆ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ನಿರ್ದೇಶಕ ಮಂಡಳಿಯ ಎಲ್ಲ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.



ಆಶ್ರಮದ ಹಿರಿಯರ ಆರೈಕೆ ಮತ್ತು ಕಲ್ಯಾಣಕ್ಕಾಗಿ ಮಾರಿಯಾ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಮಂಡಳಿ ಈ ಜವಾಬ್ದಾರಿ ವಹಿಸಿದೆ.



ಆಶ್ರಮದ ದೈನಂದಿನ ನಿರ್ವಹಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು, ಹಿರಿಯರ ಅಗತ್ಯಗಳನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.


ನೇಮಕದ ಬಳಿಕ ಆಶ್ರಮದ ಹಿರಿಯರನ್ನು ಭೇಟಿಯಾದ ಮಾರಿಯಾ ಅವರು, ಅವರ ಆಶೀರ್ವಾದ ಪಡೆದರು. ಹೊಸ ಜವಾಬ್ದಾರಿ ವಹಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿ, ಹಿರಿಯರ ಸಮ್ಮುಖದಲ್ಲೇ ಅದನ್ನು ಸ್ವೀಕರಿಸಿದರು.

 
 
 

Comments


bottom of page