;
top of page

ಚೂನಪ್ಪ ಪೂಜೇರಿ ಬಂಧನ

Writer: vilas joshi
vilas joshi
11 minutes ago
1 min read

ಬೆಳಗಾವಿಯತ್ತ ರೈತರ ಪಾದಯಾತ್ರೆ; ಚೂನಪ್ಪ ಪೂಜೇರಿ ಬಂಧನ.


ಪೊಲೀಸ್ ಆಯುಕ್ತರ ನಿಷೇಧದ ಹಿನ್ನೆಲೆಯಲ್ಲಿ ಮುಕ್ತಿಮಠದ ಬಳಿ ಕ್ರಮ


ಬೆಳಗಾವಿ: ಕಬ್ಬಿಗೆ ಸೂಕ್ತ ದರ ನಿಗದಿಪಡಿಸಬೇಕೆಂದು ಆಗ್ರಹಿಸಿ ಪಾದಯಾತ್ರೆ ಮೂಲಕ ಬೆಳಗಾವಿಯತ್ತ ಬರುತ್ತಿದ್ದ ರೈತ ಸಂಘದ ನಾಯಕ ಚೂನಪ್ಪ ಪೂಜೇರಿ ಅವರನ್ನು ಮುಕ್ತಿಮಠದ ಬಳಿ ಪೊಲೀಸರು ಬಂಧಿಸಿದರು. ರೈತರ ಪ್ರತಿಭಟನೆಗೆ ಸಂಬಂಧಿಸಿ ಪೊಲೀಸ್ ಆಯುಕ್ತರು ನಿಷೇಧ ಹೊರಡಿಸಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.


ಕಬ್ಬಿನ ದರ ನಿಗದಿ ವಿಚಾರದಲ್ಲಿ ತಮ್ಮ ಬೇಡಿಕೆಗಳನ್ನು ಮುಂದಿಟ್ಟು ರೈತರು ಬೆಳಗಾವಿಯತ್ತ ಪಾದಯಾತ್ರೆ ನಡೆಸುತ್ತಿದ್ದರು. ಈ ವೇಳೆ ಮುಕ್ತಿಮಠದ ಬಳಿ ಪೂಜೇರಿ ಅವರನ್ನು ಪೊಲೀಸರು ಸುತ್ತುವರಿದು ವಶಕ್ಕೆ ಪಡೆದರು. ಹಸಿರು ಶಾಲು ಧರಿಸಿದ್ದ ಅವರನ್ನು ಪೊಲೀಸರು ಕೈಹಿಡಿದು ಕರೆದೊಯ್ಯುತ್ತಿರುವ ದೃಶ್ಯ ವಿಡಿಯೊದಲ್ಲಿ ದಾಖಲಾಗಿದೆ.


ದರ ಬಿಕ್ಕಟ್ಟಿನ ನಡುವೆ ಪಾದಯಾತ್ರೆ

ಕಬ್ಬಿಗೆ ಪ್ರತಿ ಟನ್‌ಗೆ ಕನಿಷ್ಠ ₹5,500 ದರ ನೀಡಬೇಕು ಎಂಬ ಬೇಡಿಕೆಯೊಂದಿಗೆ ರೈತ ಸಂಘಟನೆಗಳು ಹೋರಾಟ ನಡೆಸುತ್ತಿವೆ. ದರದ ವಿಚಾರವಾಗಿ ರೈತರು ಹಾಗೂ ಸಕ್ಕರೆ ಕಾರ್ಖಾನೆಗಳ ನಡುವಿನ ಬಿಕ್ಕಟ್ಟು ಬಗೆಹರಿಸಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸಂಧಾನ ನಡೆಸಿದ್ದರು.

ಕಾರ್ಖಾನೆಗಳು ಪ್ರತಿ ಟನ್‌ಗೆ ₹3,600 ನೀಡುವ ಪ್ರಸ್ತಾಪ ಮುಂದಿಟ್ಟಿದ್ದು, ಮೊದಲು ಕಬ್ಬು ನುರಿಸುವ ಕಾರ್ಯ ಆರಂಭಿಸಬೇಕು. ಸಕ್ಕರೆಯ ಕನಿಷ್ಠ ಮಾರಾಟ ದರ ಹೆಚ್ಚಳದಿಂದ ಹೆಚ್ಚುವರಿ ಆದಾಯ ಬಂದರೆ, ರೈತರಿಗೆ ಎರಡನೇ ಕಂತಿನಲ್ಲಿ ಹೆಚ್ಚುವರಿ ಹಣ ಕೊಡಿಸುವ ಪ್ರಯತ್ನ ನಡೆಸುವುದಾಗಿ ಸಚಿವರು ತಿಳಿಸಿದ್ದರು. ಆದರೆ, ಈ ಪ್ರಸ್ತಾಪಕ್ಕೆ ರೈತರ ಒಪ್ಪಿಗೆ ಪಡೆಯುವ ಪ್ರಯತ್ನ ಮುಂದುವರಿದಿತ್ತು

 
 
 

Comments


bottom of page