;
top of page

ಜಿಲ್ಲಾ ಬಂಟರ ಸಂಘಕ್ಕೆ ಜಯಶೀಲ ಶೆಟ್ಟಿ ಸಾರಥ್ಯ

Writer: vilas joshi
vilas joshi
10 minutes ago
1 min read

42ನೇ ವಾರ್ಷಿಕ ಮಹಾಸಭೆಯಲ್ಲಿ ಪದಾಧಿಕಾರಿಗಳ ಅವಿರೋಧ ಆಯ್ಕೆ |


ಉಳ್ತೂರು ಸಂತೋಷ್ ಶೆಟ್ಟಿ ಪ್ರಧಾನ ಕಾರ್ಯದರ್ಶಿ


ಬೆಳಗಾವಿ:

ಬೆಳಗಾವಿ ಜಿಲ್ಲಾ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಘಟಪ್ರಭಾದ ಜಯಶೀಲ ಎನ್. ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಉಳ್ತೂರು ಸಂತೋಷ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು. ಇಬ್ಬರನ್ನೂ ಮುಂದಿನ ಎರಡು ವರ್ಷಗಳ ಅವಧಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.



ನಗರದ ಬಂಟರ ಭವನದಲ್ಲಿ ನವೆಂಬರ್ 22ರಂದು ನಡೆದ ಸಂಘದ 42ನೇ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಂಘದ ಸ್ಥಾಪಕಾಧ್ಯಕ್ಷ ಹಾಗೂ ಗೌರವಾಧ್ಯಕ್ಷ ವಿಠಲ್ ಎಸ್. ಹೆಗ್ಡೆ, ನಿಕಟಪೂರ್ವ ಅಧ್ಯಕ್ಷ ವಿಜಯ್ ಎಂ. ಶೆಟ್ಟಿ ಹಾಗೂ ಮಾಜಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಉಪಸ್ಥಿತರಿದ್ದರು.



ಮಾಜಿ ಉಪಾಧ್ಯಕ್ಷರಾದ ಪ್ರಸನ್ನ ಕುಮಾರ್ ಶೆಟ್ಟಿ, ಹಿಡ್ಕಲ್‌ನ ಕರುಣಾಕರ ಶೆಟ್ಟಿ, ಮಾಜಿ ಪ್ರಧಾನ ಕಾರ್ಯದರ್ಶಿ ಚೇತನ್ ಶೆಟ್ಟಿ, ಮಾಜಿ ಖಜಾಂಚಿ ಪ್ರಣಯ್ ಆರ್. ಶೆಟ್ಟಿ ಹಾಗೂ ಮಾಜಿ ಸಂಘಟನಾ ಕಾರ್ಯದರ್ಶಿ ಪ್ರಭಾಕರ್ ಶೆಟ್ಟಿ ಮಹಾಸಭೆಯಲ್ಲಿ ಪಾಲ್ಗೊಂಡರು.



ಹಿರಿಯ ಸದಸ್ಯ ಬಾರ್ಕೂರು ನಡುಮನೆ ಜಯರಾಮ್ ಶೆಟ್ಟಿ, ಮಾಜಿ ಪೊಲೀಸ್ ವರಿಷ್ಠಾಧಿಕಾರಿ ಜೆ.ಎಂ. ಕರುಣಾಕರ್ ಶೆಟ್ಟಿ, ಯರಗಟ್ಟಿಯ ರತ್ನಾಕರ್ ಶೆಟ್ಟಿ, ಕಿಯೋನಿಕ್ಸ್‌ನ ಉದಯ್ ಶೆಟ್ಟಿ, ಗೋಪಿನಾಥ್ ವಿ. ಹೆಗ್ಡೆ, ಸುರೇಶ್ ವಿ. ಶೆಟ್ಟಿ, ಶ್ರೀಧರ್ ಶೆಟ್ಟಿ, ವಕೀಲರಾದ ರವೀಂದ್ರ ಎನ್. ಶೆಟ್ಟಿ ಮತ್ತು ಪ್ರಭಾಕರ್ ಶೆಟ್ಟಿ ಸೇರಿದಂತೆ ಸಂಘದ ಹಿರಿಯ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಸದಸ್ಯರು ಉಪಸ್ಥಿತರಿದ್ದರು.



 
 
 

Comments


bottom of page