ಗಣೇಶೋತ್ಸವ ಅನುಮತಿಗೆ ‘ಏಕಗವಾಕ್ಷಿ’ ವ್ಯವಸ್ಥೆ
- vilas joshi
- 2 hours ago
- 1 min read
ಬೆಳಗಾವಿಯ 12 ಪೊಲೀಸ್ ಠಾಣೆಗಳಲ್ಲಿ ಕೇಂದ್ರ ಆರಂಭ; ಒಂದೇ ಕಡೆ ಅಗತ್ಯ ಅನುಮತಿ
ಬೆಳಗಾವಿ: ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಅನುಮತಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಬೆಳಗಾವಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 12 ಪೊಲೀಸ್ ಠಾಣೆಗಳಲ್ಲಿ ಆಗಸ್ಟ್ 31ರಿಂದ ‘ಏಕಗವಾಕ್ಷಿ’ ಕೇಂದ್ರಗಳು ಕಾರ್ಯನಿರ್ವಹಿಸಲಿವೆ.

ಮಾರ್ಕೆಟ್, ಮಾಳಮಾರುತಿ, ಶಹಾಪುರ, ಎಪಿಎಂಸಿ, ಖಡೇಬಜಾರ್, ಕ್ಯಾಂಪ್, ತಿಲಕವಾಡಿ, ಉದ್ಯಮಬಾಗ, ಬೆಳಗಾವಿ ಗ್ರಾಮೀಣ, ಕಾಕತಿ, ಮಾರಿಹಾಳ ಹಾಗೂ ಹಿರೇಬಾಗೇವಾಡಿ ಠಾಣೆಗಳಲ್ಲಿ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರತಿ ಕೇಂದ್ರಕ್ಕೂ ನೋಡಲ್ ಅಧಿಕಾರಿ ಅಥವಾ ಸಿಬ್ಬಂದಿಯನ್ನು ನೇಮಿಸಿ, ಅವರ ಮೊಬೈಲ್ ಸಂಖ್ಯೆಯನ್ನೂ ಪ್ರಕಟಿಸಲಾಗಿದೆ.

ಗಣೇಶ ಮೂರ್ತಿ ಪ್ರತಿಷ್ಠಾಪನೆ, ಪೆಂಡಾಲ್, ಧ್ವನಿವರ್ಧಕ ಬಳಕೆ, ವಿದ್ಯುತ್ ಸಂಪರ್ಕ, ಮೆರವಣಿಗೆ ಮಾರ್ಗ ಹಾಗೂ ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿದ

ಅನುಮತಿಗಳನ್ನು ಒಂದೇ ಕಡೆ ಪಡೆಯಲು ಈ ವ್ಯವಸ್ಥೆ ನೆರವಾಗಲಿದೆ.
ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳು ಸಂಬಂಧಪಟ್ಟ ಪೊಲೀಸ್ ಠಾಣೆಯ ಕೇಂದ್ರವನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು. ನಿಗದಿತ ಮೆರವಣಿಗೆ ಮಾರ್ಗ, ಧ್ವನಿವರ್ಧಕ ಬಳಕೆಯ ಸಮಯ ಹಾಗೂ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪೊಲೀಸರು ಸೂಚಿಸಿದ್ದಾರೆ.
.

ಮುಖ್ಯಾಂಶಗಳು.
ನಗರ ವ್ಯಾಪ್ತಿಯ 12 ಠಾಣೆಗಳಲ್ಲಿ ಏಕಗವಾಕ್ಷಿ ಕೇಂದ್ರ.
ಪ್ರತಿ ಠಾಣೆಗೆ ಪ್ರತ್ಯೇಕ ನೋಡಲ್ ಅಧಿಕಾರಿ.
ಅನುಮತಿಗಾಗಿ ವಿವಿಧ ಕಚೇರಿಗಳಿಗೆ ಅಲೆದಾಟ ತಪ್ಪಲಿದೆ.
ಪೊಲೀಸ್ ಮತ್ತು ಸಂಬಂಧಿತ ಇಲಾಖೆಗಳ ನಡುವೆ ಸಮನ್ವಯ
ಶಾಂತಿಯುತ ಗಣೇಶೋತ್ಸವಕ್ಕೆ ನಿಯಮ ಪಾಲನೆ ಕಡ್ಡಾಯ.




Comments