;
top of page

ರಾಹುಲ್‌ ಶಿಂಧೆ ಹೆಗಲಿಗೆ ರಾಜ್ಯದ ಹೊಣೆ

  • Writer: vilas joshi
    vilas joshi
  • Aug 28
  • 1 min read

ಬೆಳಗಾವಿ ಜಿಪಂ ಸಿಇಒಗೆ ಪಂಚಾಯತ್‌ ರಾಜ ಆಯುಕ್ತಾಲಯದ ವಿಶೇಷ ಅಧಿಕಾರಿ ಜವಾಬ್ದಾರಿ.


ಬೆಳಗಾವಿ:

ಬೆಳಗಾವಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್‌ ಶಿಂಧೆ ಅವರ ಆಡಳಿತ ಕಾರ್ಯವ್ಯಾಪ್ತಿ ಈಗ ರಾಜ್ಯಮಟ್ಟಕ್ಕೆ ವಿಸ್ತರಿಸಿದೆ. ಹಾಲಿ ಹುದ್ದೆಯೊಂದಿಗೆ ಪಂಚಾಯತ್‌ ರಾಜ ಆಯುಕ್ತಾಲಯದ ವಿಶೇಷ ಅಧಿಕಾರಿಯಾಗಿ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆಗಸ್ಟ್‌ 27ರಂದು ಅಧಿಸೂಚನೆ ಹೊರಡಿಸಿದೆ.

ಪಂಚಾಯತ್‌ ರಾಜ ಆಯುಕ್ತಾಲಯದಲ್ಲಿನ ಸಾಂಸ್ಥಿಕ ಬದಲಾವಣೆ ಮತ್ತು ಖಾಲಿ ಹುದ್ದೆಗಳ ಹಿನ್ನೆಲೆಯಲ್ಲಿ ಯೋಜನೆಗಳ ಅನುಷ್ಠಾನಕ್ಕೆ ತಾಂತ್ರಿಕ ನೆರವು ಹಾಗೂ ಪರಿಣಾಮಕಾರಿ ಸಮನ್ವಯ ಒದಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಯೋಜನಾ ನಿರ್ವಹಣಾ ಘಟಕವನ್ನು (ಪಿಎಂಯು) ಬಲಪಡಿಸುವ ಪ್ರಮುಖ ಹೊಣೆಯೂ ಶಿಂಧೆ ಅವರ ಮೇಲಿದೆ.

ಆಗಸ್ಟ್‌ 24ರ ಸಚಿವ ಸಂಪುಟ ಸಭೆಯ ತೀರ್ಮಾನದಂತೆ ಆರ್‌ಡಿಪಿಆರ್‌/755/ಜಿಪಿಎ/2026 ಸಂಖ್ಯೆಯ ಆದೇಶ ಹೊರಬಿದ್ದಿದೆ. ಬೆಳಗಾವಿ ಜಿಪಂ ಸಿಇಒ ಆಗಿ ಮುಂದುವರಿಯುತ್ತಲೇ ಅವರು ಈ ಹೆಚ್ಚುವರಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ರಾಜ್ಯದ ಅತಿ ದೊಡ್ಡ ಜಿಲ್ಲೆಗಳಲ್ಲಿ ಒಂದಾದ ಬೆಳಗಾವಿಯಲ್ಲಿ ಗ್ರಾಮೀಣ ಯೋಜನೆಗಳ ಅನುಷ್ಠಾನ ಮತ್ತು ಸ್ಥಳೀಯ ಸಂಸ್ಥೆಗಳ ಸಮನ್ವಯದ ಅನುಭವ ಹೊಂದಿರುವ ಅಧಿಕಾರಿಯನ್ನು ಆಯುಕ್ತಾಲಯಕ್ಕೆ ಜೋಡಿಸಿರುವುದು ಮಹತ್ವ ಪಡೆದಿದೆ. ಜಿಲ್ಲಾಮಟ್ಟದಲ್ಲಿ ಎದುರಾಗುವ ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳಿಗೆ ರಾಜ್ಯಮಟ್ಟದಲ್ಲೇ ಪರಿಹಾರ ಕಂಡುಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ.


ಆದರೆ ಬೆಳಗಾವಿಯ ದೈನಂದಿನ ಆಡಳಿತದೊಂದಿಗೆ ಬೆಂಗಳೂರಿನ ರಾಜ್ಯಮಟ್ಟದ ಜವಾಬ್ದಾರಿಯನ್ನೂ ನಿಭಾಯಿಸಬೇಕಿರುವುದು ಶಿಂಧೆ ಅವರಿಗೆ ಹೊಸ ಸವಾಲು. ಹೆಚ್ಚುವರಿ ಅಧಿಕಾರದ ಜತೆಗೆ ಹೊಣೆಗಾರಿಕೆಯೂ ದುಪ್ಪಟ್ಟಾಗಿದೆ.

 
 
 

Comments


bottom of page