;
top of page

ಗೃಹಲಕ್ಷ್ಮಿ: ಸತ್ತವರ ಹೆಸರಿನಲ್ಲಿ ಹಣ; ಬೆಳಗಾವಿಯೇ ನಂ.1

Writer: vilas joshi
vilas joshi
Sep 5
2 min read

ಮರಣದ ದಿನಾಂಕದ ನಂತರ 47,921 ಕಂತುಗಳ ಪಾವತಿ ದಾಖಲೆ; ₹9.58 ಕೋಟಿ* 

 ರಾಜ್ಯದಲ್ಲೇ ಗರಿಷ್ಬ ಬೆಳಗಾವಿಯಲ್ಲಿ 22,755 ಮೃತ ಫಲಾನುಭವಿಗಳ ದಾಖಲೆ |*


 8,681 ಪ್ರಕರಣಗಳಲ್ಲಿ ಸಾವಿನ ಬಳಿಕವೂ ಕಂತು | 


 ರಾಜ್ಯದಾದ್ಯಂತ ₹115.94 ಕೋಟಿ. 


ಇ ಬೆಳಗಾವಿ‌ ವಿಶೇಷ


 ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮಿ’ ಯೋಜನೆಯ ಫಲಾನುಭವಿಗಳ ದತ್ತಾಂಶದಲ್ಲಿ ಬೆಚ್ಚಿಬೀಳಿಸುವ ಅಂಶವೊಂದು ಮಹಾಲೇಖಪಾಲರ (AG Audit) ಪರಿಶೀಲನೆ ವೇಳೆ ಹೊರಬಿದ್ದಿದ್ದು, ಮರಣದ ದಿನಾಂಕದ ನಂತರವೂ ಪಾವತಿಯಾದ ಮೊತ್ತದಲ್ಲಿ ಬೆಳಗಾವಿ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ.

ಆಡಿಟ್ ದಾಖಲೆಗಳಿಗೆ ಒದಗಿಸಲಾದ ‘Death Details Till March–2026’ ಪಟ್ಟಿಯ ಪ್ರಕಾರ, ಬೆಳಗಾವಿ ಜಿಲ್ಲೆಯಲ್ಲಿ 22,755 ಮೃತ ಫಲಾನುಭವಿಗಳ ದಾಖಲೆ ಇದೆ. ಈ ಪೈಕಿ 8,681 ಪ್ರಕರಣಗಳಲ್ಲಿ ಮರಣದ ದಿನಾಂಕದ ನಂತರ 47,921 ಕಂತುಗಳು ಪಾವತಿಯಾಗಿದ್ದು, ಅವುಗಳ ಒಟ್ಟು ಮೊತ್ತ ₹9,58,42,000 — ಅಂದರೆ ₹9.58 ಕೋಟಿ.


ಪಟ್ಟಿಯಲ್ಲಿರುವ ಜಿಲ್ಲೆಗಳ ಪೈಕಿ ಮರಣಾನಂತರ ಪಾವತಿಯಾದ ಕಂತುಗಳ ಸಂಖ್ಯೆ ಮತ್ತು ಮೊತ್ತ ಎರಡರಲ್ಲೂ ಬೆಳಗಾವಿಯದೇ ಅತಿ ದೊಡ್ಡ ಅಂಕಿ ಎಂಬುದು ಗಮನ ಸೆಳೆದಿದೆ.


ಸತ್ತ ಮೇಲೂ ಕಂತು; ವ್ಯವಸ್ಥೆ ನಿದ್ರೆಯಲ್ಲಿತ್ತೇ?


ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರತಿ ತಿಂಗಳು ಫಲಾನುಭವಿಗಳ ಅರ್ಹತೆ ಪರಿಶೀಲಿಸಿ ಹಣ ವರ್ಗಾಯಿಸುವ ವ್ಯವಸ್ಥೆ ಇದ್ದರೂ, ಫಲಾನುಭವಿಯ ಮರಣದ ನಂತರವೂ ಕಂತುಗಳು ಮುಂದುವರಿದಿರುವ ದಾಖಲೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.


ಮರಣ ನೋಂದಣಿ ದತ್ತಾಂಶ ಮತ್ತು ಗೃಹಲಕ್ಷ್ಮಿ ಫಲಾನುಭವಿಗಳ ಪಟ್ಟಿಯ ನಡುವೆ ಹೊಂದಾಣಿಕೆ ಏಕೆ ಆಗಲಿಲ್ಲ? ಫಲಾನುಭವಿ ಮೃತಪಟ್ಟ ಮಾಹಿತಿ ಇಲಾಖೆಗೆ ಯಾವಾಗ ತಲುಪಿತು? ಮರಣದ ನಂತರ ಪಾವತಿಯಾದ ಹಣ ಯಾವ ಬ್ಯಾಂಕ್ ಖಾತೆಗೆ ಹೋಗಿದೆ? ಅದನ್ನು ವಾಪಸ್ ಪಡೆಯಲಾಗಿದೆಯೇ? ಎಂಬ ಪ್ರಶ್ನೆಗಳಿಗೆ ಸರ್ಕಾರವೇ ಉತ್ತರಿಸಬೇಕಾಗಿದೆ.


ಇಲ್ಲಿ ಒಂದು ಅಂಶ ಸ್ಪಷ್ಟ: ಆಡಿಟ್ ಪಟ್ಟಿಯಲ್ಲಿ ‘Number of instalments after date of death’ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ₹9.58 ಕೋಟಿ ನೇರವಾಗಿ ಮೃತರದೇ ಬ್ಯಾಂಕ್ ಖಾತೆಗೆ ಹೋಗಿದೆ ಎಂದು ತೀರ್ಮಾನಿಸುವುದಕ್ಕಿಂತ, ಮರಣದ ದಿನಾಂಕದ ನಂತರ ಪಾವತಿ ದಾಖಲಾಗಿರುವ ಮೊತ್ತ ಎಂದು ಹೇಳುವುದೇ ದಾಖಲೆ ಆಧಾರಿತವಾಗಿ ಹೆಚ್ಚು ನಿಮರುಅರ್ಜಿ

ಖರ.


ರಾಜ್ಯದಲ್ಲೇ ₹115.94 ಕೋಟಿ!


ರಾಜ್ಯಮಟ್ಟದಲ್ಲಿ ಪಟ್ಟಿಯಲ್ಲಿರುವ 2,88,376 ಮೃತ ಫಲಾನುಭವಿಗಳ ಪೈಕಿ 1,08,755 ಪ್ರಕರಣಗಳಿಗೆ ಸಂಬಂಧಿಸಿ ಮರಣದ ದಿನಾಂಕದ ನಂತರ 5,79,696 ಕಂತುಗಳು ಪಾವತಿಯಾಗಿವೆ. ಒಟ್ಟು ಮೊತ್ತ ₹115.94 ಕೋಟಿ.

ಈ ಪಟ್ಟಿಯಲ್ಲಿ ಪ್ರಮುಖ ಜಿಲ್ಲೆಗಳ ಅಂಕಿ ಹೀಗಿದೆ:

ಬೆಳಗಾವಿ — ₹9.58 ಕೋಟಿ; 47,921 ಕಂತು.

ತುಮಕೂರು — ₹7.41 ಕೋಟಿ; 37,057 ಕಂತು.

ಬೆಂಗಳೂರು ನಗರ — ₹7.08 ಕೋಟಿ; 35,392 ಕಂತು.

ಮೈಸೂರು — ₹6.44 ಕೋಟಿ; 32,211 ಕಂತು

ಅಂದರೆ, ರಾಜ್ಯದ 31 ಜಿಲ್ಲೆಗಳಲ್ಲಿ ಬೆಳಗಾವಿಯಲ್ಲೇ ಮರಣದ ನಂತರ ಪಾವತಿಯಾದ ಮೊತ್ತ ಗರಿಷ್ಠ.

7,728 ಮರು ಅರ್ಜಿ



ಬೆಳಗಾವಿಯ ಮೃತ ಫಲಾನುಭವಿಗಳ ಪ್ರಕರಣಗಳಲ್ಲಿ 7,728 ಕುಟುಂಬಗಳು ಹೊಸ ಕುಟುಂಬದ ಮುಖ್ಯಸ್ಥರ (HOF) ಹೆಸರಿನಲ್ಲಿ ಮರುಅರ್ಜಿ ಸಲ್ಲಿಸಿರುವುದೂ ಪಟ್ಟಿಯಲ್ಲಿದೆ.

 ಮರುಅರ್ಜಿಗೂ ಮುನ್ನ ಹಳೆಯ ಫಲಾನುಭವಿಯ ಹೆಸರಿನಲ್ಲಿ ಪಾವತಿ ಮುಂದುವರಿದಿತ್ತೇ? ಮಾಹಿತಿ ಅಪ್‌ಡೇಟ್ ಆಗುವಲ್ಲಿ ವಿಳಂಬವೇ? ಅಥವಾ ದತ್ತಾಂಶ ಸಮನ್ವಯದ ಲೋಪವೇ? ಎಂಬುದನ್ನು ಇಲಾಖೆ ಸ್ಪಷ್ಟಪಡಿಸಬೇಕಾಗಿದೆ.


--

ಬೆಳಗಾವಿಯ ‘ಸಾವಿನ ಬಳಿಕದ’ ಲೆಕ್ಕ

ಮೃತ ಫಲಾನುಭವಿಗಳ ದಾಖಲೆ: 22,755

ಪರಿಶೀಲನೆಯಲ್ಲಿ ಗುರುತಾದ ಪ್ರಕರಣ: 8,681.

ಸಾವಿನ ದಿನಾಂಕದ ನಂತರದ ಕಂತು: 47,921.

ಪಾವತಿಯಾದ ಮೊತ್ತ: ₹9.58 ಕೋಟಿ.

ಹೊಸ HOF ಹೆಸರಿನಲ್ಲಿ ಮರುಅರ್ಜಿ: 7,728.

ರಾಜ್ಯದ ಜಿಲ್ಲೆಗಳ ಪೈಕಿ ಪಾವತಿ ಮೊತ್ತದಲ್ಲಿ ಬೆಳಗಾವಿಯೇ ಗರಿಷ್ಠ.

 
 
 

Comments


bottom of page