;
top of page

ಡಾ. ರವಿ ಪಾಟೀಲರಿಗೆ ಮಧ್ಯಂತರ ಬಂಧನಪೂರ್ವ ಜಾಮೀನು

Writer: vilas joshi
vilas joshi
15 hours ago
1 min read

ಫಾರಂ–7 ಸಲ್ಲಿಸಿದರೆ ಹೆಸರು ಅಳಿಯದು: ನ್ಯಾಯಾಲಯ


ಬೆಳಗಾವಿ:

ಮತದಾರರ ಹೆಸರು ತೆಗೆದುಹಾಕಲು ಫಾರಂ–7 ಸಲ್ಲಿಸಿದ ಮಾತ್ರಕ್ಕೆ ಚುನಾವಣಾಧಿಕಾರಿಗಳು ಸ್ವಯಂಚಾಲಿತವಾಗಿ ಕ್ರಮ ಕೈಗೊಳ್ಳುವುದಿಲ್ಲ. ಸ್ವತಂತ್ರ ವಿಚಾರಣೆ ಹಾಗೂ ಪರಿಶೀಲನೆ ನಡೆಸುತ್ತಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ನಿರ್ದಿಷ್ಟ ಸಮುದಾಯದ 198 ಮತದಾರರ ಹೆಸರುಗಳನ್ನು ಮತಪಟ್ಟಿಯಿಂದ ತೆಗೆದುಹಾಕುವ ಉದ್ದೇಶದಿಂದ ನಕಲಿ ಫಾರಂ–7 ಸಲ್ಲಿಸಲಾಗಿದೆ ಎಂಬ ಆರೋಪದ ಪ್ರಕರಣದಲ್ಲಿ ಡಾ. ರವಿ ಪಾಟೀಲರಿಗೆ ಷರತ್ತುಬದ್ಧ ಮಧ್ಯಂತರ ಬಂಧನಪೂರ್ವ ಜಾಮೀನು ನೀಡಿದೆ.



ಗೋಕಾಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಳಗಾವಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗಂಗಾಧರ ಕೆ.ಎನ್. ಅವರು ಈ ಆದೇಶ ನೀಡಿದ್ದಾರೆ.

ಪ್ರಕರಣವು ದಾಖಲೆ ಆಧಾರಿತವಾಗಿದ್ದು, ಸಂಬಂಧಿತ ಅರ್ಜಿಗಳು ಈಗಾಗಲೇ ಚುನಾವಣಾ ವಿಭಾಗದ ಬಿಎಲ್‌ಒ ಬಳಿಯಿವೆ ಎಂದು ನ್ಯಾಯಾಲಯ ಗಮನಿಸಿದೆ. ಸಂಬಂಧಿತ ದಾಖಲೆಯ ಬಗ್ಗೆ ಆಕ್ಷೇಪ ಎತ್ತಬೇಕಾದವರು



ಚುನಾವಣಾಧಿಕಾರಿಗಳು; ನಿರ್ದಿಷ್ಟ ಪಕ್ಷಕ್ಕೆ ಸೇರಿದ ವ್ಯಕ್ತಿಗಳಲ್ಲ ಎಂಬ ಅಭಿಪ್ರಾಯವನ್ನೂ ದಾಖಲಿಸಿದೆ.

ಬಂಧನದಿಂದ ಅರ್ಜಿದಾರರ ಹೆಸರು ಮತ್ತು ಸಾಮಾಜಿಕ ಗೌರವಕ್ಕೆ ಹಾನಿಯಾಗಬಹುದೆಂಬ ಅಂಶ ಪರಿಗಣಿಸಿ, ₹50 ಸಾವಿರದ ಬಾಂಡ್ ಹಾಗೂ ಅಷ್ಟೇ ಮೊತ್ತದ ಒಬ್ಬ ಜಾಮೀನುದಾರರೊಂದಿಗೆ ಜಾಮೀನು ಮಂಜೂರು ಮಾಡಿದೆ.

ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು, ಇತರ ಅಪರಾಧ ಚಟುವಟಿಕೆಗಳಲ್ಲಿ ತೊಡಗಬಾರದು ಹಾಗೂ ತನಿಖಾಧಿಕಾರಿ ನೋಟಿಸ್ ನೀಡಿ ಕರೆದಾಗ ಹಾಜರಾಗಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

 
 
 

Comments


bottom of page