;
top of page

ಕಸದ ರಾಶಿಯ ನಡುವೆ ಶಿವಲಿಂಗ

Writer: vilas joshi
vilas joshi
2 hours ago
1 min read

ಟಿಳಕವಾಡಿ ಸಾಯಿ ಮಂದಿರದ ಆವರಣದಲ್ಲಿ ಸ್ವಚ್ಛತೆಗೆ ಭಕ್ತರ ಆಗ್ರಹ.


ಬೆಳಗಾವಿ:

ನಗರದ ಟಿಳಕವಾಡಿಯ ಸಾಯಿ ಮಂದಿರದ ಆವರಣದಲ್ಲಿ ಅಮೃತಶಿಲೆಯ ಶಿವಲಿಂಗದ ಸುತ್ತ ಒಣ ಎಲೆಗಳು ಹಾಗೂ ಕಸ ಬಿದ್ದಿರುವುದು ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ.



ಪೂಜ್ಯಭಾವದಿಂದ ಕಾಣುವ ಶಿವಲಿಂಗದ ಸುತ್ತಲಿನ ಜಾಗವನ್ನಾದರೂ ಸ್ವಚ್ಛವಾಗಿಡಲು ಸಾಧ್ಯವಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ಲಭ್ಯವಾದ ಚಿತ್ರದಲ್ಲಿ ಕಲ್ಲಿನ ಕಟ್ಟೆಯ ಮೇಲೆ ಇರಿಸಿರುವ ಶಿವಲಿಂಗದ ಸುತ್ತ ಒಣ ಎಲೆಗಳು ಹರಡಿರುವುದು ಕಾಣಿಸುತ್ತದೆ. ‘ಯಾರನ್ನೂ ದೂಷಿಸುವ ಉದ್ದೇಶವಿಲ್ಲ. ಶಿವಲಿಂಗ ಇರುವ ಜಾಗವನ್ನು ಸ್ವಚ್ಛಗೊಳಿಸಿ, ಗೌರವಯುತವಾಗಿ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು’ ಎಂದು ಭಕ್ತರು ಮನವಿ ಮಾಡಿದ್ದಾರೆ.



ಮಂದಿರದ ಆವರಣದ ನಿರ್ವಹಣೆಯ ಹೊಣೆ ಹೊತ್ತವರು ಸ್ಥಳ ಪರಿಶೀಲಿಸಿ, ತಕ್ಷಣ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು. ಬಳಿಕವೂ ನಿಯಮಿತವಾಗಿ ಆ ಜಾಗವನ್ನು ಸ್ವಚ್ಛವಾಗಿಡಬೇಕು ಎಂಬುದು ಭಕ್ತರ ಆಗ್ರಹವಾಗಿದೆ.



 
 
 

Comments


bottom of page