;
top of page
< Back

98 ದಿನಗಳ ಹೋರಾಟಕ್ಕೆ ‘ಸರ್ಕಾರಿ’ ಬಲ!

98 ದಿನಗಳ ಹೋರಾಟಕ್ಕೆ ‘ಸರ್ಕಾರಿ’ ಬಲ!

Kannada- Marathi resolution issue

ಕನ್ನಡ ಗೊತ್ತುವಳಿ ತರದಿದ್ದರೆ ನಾವೇ ತರ್ತೇವೆ: ನಾಮನಿರ್ದೇಶಿತ ಸದಸ್ಯರ ಘೋಷಣೆ
ಬೆಳಗಾವಿ: ಕರ್ನಾಟಕ ಪರ ಗೊತ್ತುವಳಿ ವಿಚಾರದಲ್ಲಿ ಇಷ್ಟು ದಿನ ಮೌನವಾಗಿದ್ದ ಮಹಾನಗರ ಪಾಲಿಕೆ ಆಡಳಿತಕ್ಕೆ ಈಗ ಸರ್ಕಾರದ ನಾಮನಿರ್ದೇಶಿತ ಸದಸ್ಯರೇ ನೇರ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಸರ್ಕಾರದಿಂದ ನಾಮಕರಣಗೊಂಡ ರಮೇಶ ಸೊಂಟಕ್ಕಿ ಮತ್ತು ದಿನೇಶ ನಾಶಿಪುಡಿ, ಮಹಾಪೌರ ಪ್ರೀತಿ ಕಾಮಕರ ಅವರಿಗೆ ಪತ್ರ ನೀಡಿ, ಮುಂದಿನ ಸರ್ವಸಾಧಾರಣ ಸಭೆಯಲ್ಲೇ ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ; ಗಡಿವಿವಾದಕ್ಕೆ ಮಹಾಜನ ವರದಿಯೇ ಅಂತಿಮ’ ಎಂಬ ಗೊತ್ತುವಳಿ ಮಂಡಿಸುವಂತೆ ಆಗ್ರಹಿಸಿದ್ದಾರೆ.
ಅಷ್ಟೇ ಅಲ್ಲ, “ಆಡಳಿತ ಪಕ್ಷ ಮುಂದಾಗದಿದ್ದರೆ ನಾವಿಬ್ಬರೇ ಸಭೆಯಲ್ಲಿ ಗೊತ್ತುವಳಿ ಮಂಡಿಸುತ್ತೇವೆ” ಎಂದು ಘೋಷಿಸಿ ರಾಜಕೀಯವಾಗಿ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.
ಈ ಪತ್ರವನ್ನು ಸರ್ಕಾರದ ಸೂಚನೆಯ ಮೇರೆಗೆ ನೀಡಲಾಗಿದೆ ಎಂಬ ಹೇಳಿಕೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಇದರಿಂದ ‘ಸರ್ಕಾರದ ಅಭಿಪ್ರಾಯ ಬಂದಿಲ್ಲ’ ಎಂಬ ನೆಪದಲ್ಲಿ ವಿಷಯವನ್ನು ಮುಂದೂಡುತ್ತಿದ್ದ ಪಾಲಿಕೆ ಆಡಳಿತದ ಮೇಲೆ ಒತ್ತಡ ಹೆಚ್ಚಾಗಿದೆ.
22ಕ್ಕೂ ಅಧಿಕ ಕನ್ನಡ ಸಂಘಟನೆಗಳು ನಡೆಸುತ್ತಿರುವ 98 ದಿನಗಳ ಹೋರಾಟಕ್ಕೆ ಈ ಬೆಳವಣಿಗೆ ಹೊಸ ಬಲ ನೀಡಿದೆ.
ಈಗ ಪ್ರಶ್ನೆ ಒಂದೇ—
ಆಡಳಿತ ಪಕ್ಷ ಧೈರ್ಯ ತೋರುತ್ತದೆಯೇ?
ಅಥವಾ ಸರ್ಕಾರದ ಸದಸ್ಯರೇ ಕರ್ನಾಟಕದ ಧ್ವನಿ ಎತ್ತಬೇಕಾಗುತ್ತದೆಯೇ?

bottom of page