;
top of page
< Back

9 ವರ್ಷದ 'ಬಹಿಷ್ಕಾರ' ಮತ್ತೇ ವಾಟ್ಸಪನಲ್ಲಿ ವೈರಲ್..

9 ವರ್ಷದ 'ಬಹಿಷ್ಕಾರ' ಮತ್ತೇ ವಾಟ್ಸಪನಲ್ಲಿ ವೈರಲ್..

9 Years of Social Boycott… Goes Viral Again…

9 ವರ್ಷದ ‘ಬಹಿಷ್ಕಾರ’ ಮತ್ತೆ ವಾಟ್ಸ್ಆ್ಯಪ್‌ನಲ್ಲಿ ಸದ್ದು!

18ಕ್ಕೂ ಹೆಚ್ಚು ಗುಂಪುಗಳಲ್ಲಿ ಕುಟುಂಬದ ವಿರುದ್ಧ ಸಂದೇಶ: ಉಪನ್ಯಾಸಕರಿಂದ ಜಿಲ್ಲಾಧಿಕಾರಿಗೆ ದೂರು.

ಬೆಳಗಾವಿ: ಒಂಬತ್ತು ವರ್ಷಗಳ ಹಿಂದೆ ತಮ್ಮ ಕುಟುಂಬಕ್ಕೆ ವಿಧಿಸಲಾಗಿತ್ತು ಎನ್ನಲಾದ ಸಾಮಾಜಿಕ ಬಹಿಷ್ಕಾರದ ವಿಷಯವನ್ನು ಮತ್ತೆ ಕೆದಕಿ, ರಾಜ್ಯದ ವಿವಿಧ ಮೇದಾರ ಸಮಾಜದ ವಾಟ್ಸ್ಆ್ಯಪ್ ಗುಂಪುಗಳಲ್ಲಿ ಹರಿಬಿಟ್ಟು ಮಾನಹಾನಿಗೆ ಯತ್ನಿಸಲಾಗಿದೆ ಎಂದು ಯಮಕನಮರಡಿಯ ಉಪನ್ಯಾಸಕ ವಿಜಯಕುಮಾರ ಗಂಗಾಧರ ಮೇದಾರ ಆರೋಪಿಸಿದ್ದಾರೆ.
ಸುಮಾರು 18ರಿಂದ 20 ವಾಟ್ಸ್ಆ್ಯಪ್ ಗುಂಪುಗಳಲ್ಲಿ ತಮ್ಮ ಕುಟುಂಬದ ವಿರುದ್ಧ ಸಂದೇಶಗಳು ಹಾಗೂ ಹಳೆಯ ಬಹಿಷ್ಕಾರದ ಪತ್ರದ ಪ್ರತಿಯನ್ನು ಪ್ರಸಾರ ಮಾಡಲಾಗಿದೆ ಎಂದು ಅವರು ಜಿಲ್ಲಾಧಿಕಾರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ಅಥಣಿ ನಿವಾಸಿ ರಮೇಶ ಬುರುಡ ಎಂಬುವರು ಈ ಸಂದೇಶಗಳನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಿರುವ ವಿಜಯಕುಮಾರ, ಸಂದೇಶಗಳು ಹರಿದಾಡಿದ ಬಳಿಕ ರಾಜ್ಯದ ವಿವಿಧ ಭಾಗಗಳಿಂದ ನಿರಂತರ ಕರೆಗಳು ಬರುತ್ತಿದ್ದು, ಕುಟುಂಬ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದೆ ಎಂದು ಹೇಳಿದ್ದಾರೆ.

ಈ ಪ್ರಕರಣಕ್ಕೆ ರಾಜಕೀಯ ಬಣ್ಣ ಹಚ್ಚಬಾರದು.

ಇದು ಕುಟುಂಬದ ಗೌರವ ಮತ್ತು ಸಾಮಾಜಿಕ ಪ್ರತಿಷ್ಠೆಯ ಮೇಲಿನ ದಾಳಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ
ಈ ಬಗ್ಗೆ ವಿಜಯಕುಮಾರ ಅವರು‌ ಡಿಸಿಗೆ ದೂರು ನೀಡಿದ್ದಾರೆ

bottom of page