ಸರ್ಕಾರದ ಎಕ್ಸ್‌ಪೈರಿ ಡೇಟ್ ಹತ್ತಿರ!’ ಅಭಯ ಪಾಟೀಲ ಆರೋಪ
ಸರ್ಕಾರದ ಎಕ್ಸ್‌ಪೈರಿ ಡೇಟ್ ಹತ್ತಿರ!’ ಅಭಯ ಪಾಟೀಲ ಆರೋಪ

ಸರ್ಕಾರದ ಎಕ್ಸ್‌ಪೈರಿ ಡೇಟ್ ಹತ್ತಿರ!
‘ನಾವು ಅವಧಿ ಮುಗಿಸುವುದಿಲ್ಲ; ಜನರೇ ಮುಗಿಸುತ್ತಾರೆ’ — ಅಭಯ ಪಾಟೀಲ.
ಬೆಳಗಾವಿ:
“ನಾವು ಸರ್ಕಾರದ ಅವಧಿ ಮುಗಿಸುವುದಿಲ್ಲ. ಜನರೇ ಮುಗಿಸುತ್ತಾರೆ. ಸರ್ಕಾರದ ಎಕ್ಸ್‌ಪೈರಿ ಡೇಟ್ ಹತ್ತಿರ ಬಂದಿದೆ” ಎಂದು ಶಾಸಕ ಅಭಯ ಪಾಟೀಲ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಬೆಳಗಾವಿ ನಗರದ ಅಭಿವೃದ್ಧಿಗೆ ಒಂದು ಪೈಸೆಯೂ ವಿಶೇಷ ಅನುದಾನ ಬಂದಿಲ್ಲ ಎಂದು ಆರೋಪಿಸಿದರು. ಹಿಂದೆ ಪ್ರತಿವರ್ಷ ಸುಮಾರು ₹100 ಕೋಟಿ ನಗರಾಭಿವೃದ್ಧಿ ನೆರವು ಬರುತ್ತಿತ್ತು. ಈಗ ಅದೂ ಸ್ಥಗಿತಗೊಂಡಿದೆ ಎಂದರು.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಹಿಂದೆ ಪ್ರತಿವರ್ಷ 500ರಿಂದ 1,000 ಮನೆಗಳು ಮಂಜೂರಾಗುತ್ತಿದ್ದವು. ಕಳೆದ ಮೂರು ವರ್ಷಗಳಿಂದ ಹೊಸ ಮನೆಗಳ ಮಂಜೂರಾತಿ ಶೂನ್ಯವಾಗಿದೆ. ಹಿಂದಿನ ಸರ್ಕಾರ ಅನುಮೋದಿಸಿದ್ದ 1,400 ಮನೆಗಳ ಪೈಕಿ ಸುಮಾರು 1,000 ಮನೆಗಳನ್ನು ರದ್ದುಪಡಿಸಲಾಗಿದೆ ಎಂದು ದೂರಿದರು.
ಗಣೇಶೋತ್ಸವ ಸಮೀಪಿಸುತ್ತಿದ್ದರೂ ರಸ್ತೆ ದುರಸ್ತಿ, ಸ್ವಚ್ಛತೆ ಹಾಗೂ ಮೂಲಸೌಕರ್ಯ ಕಲ್ಪಿಸಲು ಮಹಾನಗರ ಪಾಲಿಕೆಗೆ ಅಗತ್ಯ ಅನುದಾನ ಬಿಡುಗಡೆಯಾಗಿಲ್ಲ ಎಂದರು.
“ಇಷ್ಟು ದಿನ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎನ್ನುತ್ತಿದ್ದೆವು. ಈಗ ಮಾನಸಿಕವಾಗಿಯೂ ದಿವಾಳಿಯಾಗಿದೆ. ಮುಖ್ಯಮಂತ್ರಿ ಬದಲಾದರೂ ನೇಮ್‌ಪ್ಲೇಟ್ ಮಾತ್ರ ಬದಲಾಗಿದೆ; ಕಾರ್ಯಶೈಲಿ ಬದಲಾಗಿಲ್ಲ” ಎಂದು ಟೀಕಿಸಿದರು.
