;
top of page
< Back

ಸರ್ಕಾರಕ್ಕೆ ಪತ್ರ ನೆಪಕ್ಕೆ ಡಿಸಿ ಬ್ರೆಕ್

ಸರ್ಕಾರಕ್ಕೆ ಪತ್ರ ನೆಪಕ್ಕೆ ಡಿಸಿ ಬ್ರೆಕ್

Kannada issue

ಬೆಳಗಾವಿ ಕರ್ನಾಟಕದ್ದೇ: ಮುಂದಿನ ಪಾಲಿಕೆ ಸಭೆಯಲ್ಲಿ ಠರಾವ್ ಮಂಡಿಸುವೆ - ಶಾಸಕ ಆಸೀಫ್ ಸೇಠ ಘೋಷಣೆ.

ಸತೀಶ ಜಾರಕಿಹೊಳಿ ಸಮ್ಮುಖದಲ್ಲಿ ಮಹತ್ವದ ಸಭೆ | ಸರ್ಕಾರಕ್ಕೆ ಪತ್ರ ನೆಪಕ್ಕೆ ಡಿಸಿ ತೆರೆ | ಪಾಲಿಕೆ ಸಭೆ ಈಗ ಕನ್ನಡ ಸ್ವಾಭಿಮಾನದ ಪರೀಕ್ಷಾ ವೇದಿಕೆ

ಇ ಬೆಳಗಾವಿ ವಿಶೇಷ ವರದಿ
ಬೆಳಗಾವಿ:
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಒಂದು ಸಾಲಿನ ಠರಾವ್ ಅಂಗೀಕಾರದ ವಿಚಾರದಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ತೋರಿಸುತ್ತಿದ್ದ ವಿಳಂಬಕ್ಕೆ ಈಗ ನಿರ್ಣಾಯಕ ತಿರುವು ಸಿಕ್ಕಿದೆ.
ಮುಂದಿನ ಪಾಲಿಕೆ ಸಭೆಯಲ್ಲಿ ಈ ಠರಾವ್ನ್ನು ತಾವೇ ಮಂಡಿಸುವುದಾಗಿ ಶಾಸಕ ಆಸೀಫ್ ಸೇಠ ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಸಮ್ಮುಖದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ವಿಷಯ ಗಂಭೀರ ಚರ್ಚೆಗೆ ಒಳಪಟ್ಟಿತು. ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋರಸೆ, ಎಸ್ಪಿ ಡಾ. ಕೆ. ರಾಮರಾಜನ್, ಪಾಲಿಕೆ ಆಯುಕ್ತ ಕಾರ್ತಿಕ ಎಂ. ಮತ್ತು ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಕಳೆದ ಪಾಲಿಕೆ ಸಭೆಯಲ್ಲಿ ಸರ್ಕಾರಿ ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ ಅವರು ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಒಂದು ಸಾಲಿನ ಠರಾವ್ ಮಂಡಿಸಲು ಪ್ರಸ್ತಾಪಿಸಿದ್ದರು. ಆದರೆ, ಮೇಯರ್ ಅವರು ಈ ವಿಷಯ ಸುಪ್ರೀಂ ಕೋಟರ್್ನಲ್ಲಿರುವುದರಿಂದ ಸರ್ಕಾರದ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯುವ ರೂಲಿಂಗ್ ನೀಡಿದ್ದರು ಎಂದು ಪಾಲಿಕೆ ಆಯುಕ್ತರು ಸಭೆಯಲ್ಲಿ ವಿವರಿಸಿದರು.
ಈ ವಿವರಣೆಯ ನಂತರ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ವಿಷಯವನ್ನು ಮತ್ತೆ ಸಕರ್ಾರಕ್ಕೆ ಕಳುಹಿಸುವ ಅಗತ್ಯವಿಲ್ಲ; ಪಾಲಿಕೆ ತನ್ನ ಮಟ್ಟದಲ್ಲೇ ತೀರ್ಮಾನ ಕೈಗೊಳ್ಳಬಹುದು ಎಂಬ ನಿಲುವು ಸಭೆಯಲ್ಲಿ ವ್ಯಕ್ತವಾಯಿತು.
--
ಪಾಲಿಕೆ ತೀರ್ಮಾನಿಸಬಹುದು- ಡಿಸಿ ಸ್ಪಷ್ಟ ಸಂದೇಶ..
ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು, ಈ ವಿಚಾರವನ್ನು ಅನಾವಶ್ಯಕವಾಗಿ ಸರ್ಕಾರದ ಮಟ್ಟಕ್ಕೆ ತಳ್ಳುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಪಾಲಿಕೆ ತನ್ನ ಸಭೆಯಲ್ಲಿ ಈ ಕುರಿತು ತೀಮರ್ಾನ ಕೈಗೊಳ್ಳಬಹುದು. ಪ್ರತಿಯೊಂದು ವಿಷಯಕ್ಕೂ ಸರ್ಕಾರದ ಅನುಮತಿ ಕಾಯುವ ಅಗತ್ಯವಿಲ್ಲ ಎಂಬರ್ಥದ ನಿಲುವನ್ನು ಅವರು ವ್ಯಕ್ತಪಡಿಸಿದರು.
ಸದ್ಯದ ಬೆಳವಣಿಗೆ ಕುರಿತು ಸರ್ಕಾರಕ್ಕೆ ಪತ್ರ ಕಳುಹಿಸಿದ್ದೀರಾ ಎಂದು ಪಾಲಿಕೆ ಆಯುಕ್ತರನ್ನು ಪ್ರಶ್ನಿಸಿದಾಗ ಸ್ಪಷ್ಟ ಉತ್ತರ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಡಿಸಿ, ಈ ಬಗ್ಗೆ ಅಧಿಕೃತವಾಗಿ ಪತ್ರ ಬರೆದರೆ ತಾವೇ ಸೂಕ್ತ ನಿಧರ್ಾರ ಕೈಗೊಳ್ಳುವುದಾಗಿ ತಿಳಿಸಿದರು.
--
ನಾನೇ ಮಂಡಿಸುವೆ ಆಸೀಫ್ ಸೇಠ
ಸಭೆಯಲ್ಲಿ ನಾಮನಿರ್ದೇಶಿತ ಸದಸ್ಯರು ಇಂಥ ಠರಾವ್ ಮಂಡಿಸಲು ಅವಕಾಶವಿದೆಯೇ ಎಂಬ ವಿಚಾರವೂ ಚಚರ್ೆಗೆ ಬಂತು. ಈ ಹಂತದಲ್ಲಿ ಶಾಸಕ ಆಸೀಫ್ ಸೇಠ ಅವರು ವಿಷಯಕ್ಕೆ ನೇರ ಉತ್ತರ ನೀಡಿದರು.
ಮುಂದಿನ ಪಾಲಿಕೆ ಸಭೆಯಲ್ಲಿ ಬೆಳಗಾವಿ ಕನರ್ಾಟಕದ ಅವಿಭಾಜ್ಯ ಅಂಗ ಎಂಬ ಠರಾವ್ನ್ನು ನಾನೇ ಮಂಡಿಸುತ್ತೇನೆ ಎಂದು ಘೋಷಿಸಿದರು.
ಈ ಹೇಳಿಕೆಯಿಂದ ಇದುವರೆಗೆ ಇದ್ದ ಗೊಂದಲಕ್ಕೆ ತೆರೆ ಬಿದ್ದಂತಾಗಿದೆ. ಯಾರು ಮಂಡಿಸಬೇಕು, ಯಾವ ನಿಯಮದಡಿ ಮಂಡಿಸಬೇಕು, ಸಕರ್ಾರಕ್ಕೆ ಕಳುಹಿಸಬೇಕೇ ಎಂಬ ಪ್ರಶ್ನೆಗಳು ಈಗ ಹಿಂದೆ ಸರಿದಿದ್ದು, ವಿಷಯ ನೇರವಾಗಿ ಪಾಲಿಕೆ ಸಭೆಯ ಅಂಗಳಕ್ಕೆ ಬರಲಿದೆ.

ಸಭೆಯಲ್ಲಿ, ಈ ಠರಾವ್ಗೆ ಎಂಇಎಸ್ನ ಕೆಲವೇ ಸದಸ್ಯರನ್ನು ಹೊರತುಪಡಿಸಿ ಹೆಚ್ಚಿನವರು ವಿರೋಧಿಸುವ ಸಾಧ್ಯತೆ ಕಡಿಮೆ ಎಂಬ ಮಾತುಗಳು ಕೇಳಿಬಂದವು. ಆದರೂ ಯಾರಾದರೂ ವಿರೋಧ ವ್ಯಕ್ತಪಡಿಸಿದರೆ, ಅವರ ನಿಲುವು ಬೆಳಗಾವಿ ಜನರ ಮುಂದೆ ಬಯಲಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಕನ್ನಡ ಪರ ಸಂಘಟನೆಗಳು, ಠರಾವ್ಗೆ ವಿರೋಧಿಸುವವರ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸಬೇಕು; ಮುಂದೆ ಸರ್ಕಾರವೇ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದವು.
ಇದು ಒಂದು ಸಾಲಿನ ಠರಾವ್ ಮಾತ್ರವಲ್ಲ, ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದು ಹೊಸ ವಾದವಲ್ಲ. ಅದು ಇತಿಹಾಸ, ಆಡಳಿತ, ಕಾನೂನು ಮತ್ತು ಕನ್ನಡಿಗರ ಹೋರಾಟದಿಂದ ಸ್ಥಿರಗೊಂಡ ಸತ್ಯ. ಇಂತಹ ವಿಷಯವನ್ನೇ ಪಾಲಿಕೆ ಸಭೆಯಲ್ಲಿ ದಾಖಲಿಸಲು ವಿಳಂಬವಾಗುತ್ತಿರುವುದು ಕನ್ನಡ ಪರ ಸಂಘಟನೆಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಪಾಲಿಕೆ ಸಭೆಯಲ್ಲಿ ಈ ಠರಾವ್ ಮಂಡನೆಯಾದಾಗ ಯಾರು ಕನರ್ಾಟಕದ ಪರ ನಿಲ್ಲುತ್ತಾರೆ, ಯಾರು ಮೌನ ವಹಿಸುತ್ತಾರೆ, ಯಾರು ವಿರೋಧದ ಮುಖ ತೋರಿಸುತ್ತಾರೆ ಎಂಬುದು ಸಾರ್ವಜನಿಕವಾಗಿ ಸ್ಪಷ್ಟವಾಗಲಿದೆ

bottom of page