;
top of page
< Back

ವಿದ್ಯೆಯೊಂದಿಗೆ ಸದಾಚಾರ ಬೆಳೆಸುವ ವಿದ್ಯಾರ್ಥಿ ನಿಲಯಗಳೇ ಸಮಾಜದ ಆಸ್ತಿ: ಪೇಜಾವರ ಶ್ರೀ

ವಿದ್ಯೆಯೊಂದಿಗೆ ಸದಾಚಾರ ಬೆಳೆಸುವ ವಿದ್ಯಾರ್ಥಿ ನಿಲಯಗಳೇ ಸಮಾಜದ ಆಸ್ತಿ: ಪೇಜಾವರ ಶ್ರೀ

Pejawar sri

ವಿದ್ಯೆಯೊಂದಿಗೆ ಸದಾಚಾರ ಬೆಳೆಸುವ ವಿದ್ಯಾರ್ಥಿ ನಿಲಯಗಳೇ ಸಮಾಜದ ಆಸ್ತಿ: ಪೇಜಾವರ ಶ್ರೀ
‘ಉತ್ಸವಕ್ಕೆ ಸೀಮಿತವಾಗದೆ ಗುರುಗಳ ಸೇವಾ ಕನಸಿಗೆ ಮರುಜೀವ ನೀಡಿ’
ಬೆಳಗಾವಿ: ಗುರುಗಳ ಜನ್ಮಶತಾಬ್ದಿಯನ್ನು ವೇದಿಕೆ, ಭಾಷಣ ಮತ್ತು ಪೂಜೆಗೆ ಸೀಮಿತಗೊಳಿಸದೆ, ಅವರು ಸಮಾಜಕ್ಕಾಗಿ ನಿರ್ಮಿಸಿದ ಸಂಸ್ಥೆಗಳನ್ನು ಜೀರ್ಣೋದ್ಧಾರ ಮಾಡಿ ಮತ್ತೆ ಸೇವೆಗೆ ಅರ್ಪಿಸುವುದೇ ನಿಜವಾದ ಗೌರವ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.
ನಗರದ ಶ್ರೀಕೃಷ್ಣಮಠದಲ್ಲಿ ಶನಿವಾರ ನಡೆದ 60 ವರ್ಷ ಹಳೆಯ ವಿದ್ಯಾರ್ಥಿ ನಿಲಯದ ಪುನರ್‌ನಿರ್ಮಾಣ ಕುರಿತ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ‘ಉನ್ನತ ಶಿಕ್ಷಣಕ್ಕಾಗಿ ಮನೆ–ಊರು ತೊರೆಯುವ ಯುವಕರಿಗೆ ಕೇವಲ ವಸತಿ ಸಾಕಾಗುವುದಿಲ್ಲ. ವಿದ್ಯೆಯೊಂದಿಗೆ ಸಂಸ್ಕಾರ, ಸದಾಚಾರ ಮತ್ತು ಧಾರ್ಮಿಕ ಆಚರಣೆ ಉಳಿಸುವ ವಾತಾವರಣವೂ ಅಗತ್ಯ. ಇಂತಹ ವಿದ್ಯಾರ್ಥಿ ನಿಲಯಗಳೇ ಸಮಾಜದ ನಿಜವಾದ ಆಸ್ತಿ’ ಎಂದರು.
ಹಣವಿಲ್ಲದ ವಿದ್ಯಾರ್ಥಿಗಳಿಗೆ ಆಶ್ರಯ, ಅನ್ನ ಮತ್ತು ಶಿಕ್ಷಣದ ಅವಕಾಶ ನೀಡಿದ ಹಿರಿಯ ಗುರುಗಳ ಸೇವೆಯನ್ನು ಸ್ಮರಿಸಿದ ಅವರು, ‘ಧರ್ಮಂ ಚರ ಎಂಬುದು ಕೇವಲ ಮಂತ್ರವಲ್ಲ; ಜೀವನದ ಕರ್ತವ್ಯ. ಧಾರ್ಮಿಕ ಆಚರಣೆಗಳಿಂದ ನಿರಂತರವಾಗಿ ದೂರವಾದರೆ ನಮ್ಮ ಅಸ್ತಿತ್ವದ ಮೂಲವನ್ನೇ ಕಳೆದುಕೊಳ್ಳುತ್ತೇವೆ’ ಎಂದು ಎಚ್ಚರಿಸಿದರು.
ಹಿರಿಯ ಯತಿ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಜನ್ಮಶತಮಾನೋತ್ಸವದ ಅಂಗವಾಗಿ ಹಳೆಯ ವಿದ್ಯಾರ್ಥಿ ನಿಲಯವನ್ನು ನೆಲಸಮಗೊಳಿಸಿ, ₹12 ಕೋಟಿ ಅಂದಾಜು ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲು ನಿರ್ಧರಿಸಲಾಗಿದೆ. ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಅಖಿಲ ಭಾರತ ಮಾಧ್ವ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀಪಾದ ಸಿಂಘನಮಲ್ಲಿ ತಿಳಿಸಿದರು.
‘ನಮ್ಮ ಪ್ರಯತ್ನ ಒಂದು ರೆಕ್ಕೆಯಾದರೆ, ಶ್ರೀಕೃಷ್ಣನ ಅನುಗ್ರಹ ಮತ್ತೊಂದು ರೆಕ್ಕೆ. ಎರಡೂ ಸೇರಿದಾಗ ಸಂಕಲ್ಪ ಯಶಸ್ಸಿನ ಆಕಾಶದಲ್ಲಿ ಹಾರುತ್ತದೆ’ ಎಂದು ಶ್ರೀಗಳು ಹೇಳಿದರು. ಜೀರ್ಣೋದ್ಧಾರ ಸಮಿತಿ ಸದಸ್ಯರಿಗೆ

bottom of page