;
top of page
< Back

ರವಿವಾರ ಭಾರತ್ ಕಿ ಲೋಕಧಾರಾ’ ಜಾನಪದ ಸಂಗೀತೋತ್ಸವ
ಭಾರತದ ವಿವಿಧ ಭಾಷೆಗಳ ಜಾನಪದ ಗೀತೆಗಳ ಅನಾವರಣ

ರವಿವಾರ ಭಾರತ್ ಕಿ ಲೋಕಧಾರಾ’ ಜಾನಪದ ಸಂಗೀತೋತ್ಸವ
ಭಾರತದ ವಿವಿಧ ಭಾಷೆಗಳ ಜಾನಪದ ಗೀತೆಗಳ ಅನಾವರಣ

Cultural function


ಬೆಳಗಾವಿ: ದೇಶದ ವೈವಿಧ್ಯಮಯ ಜಾನಪದ ಸಂಗೀತ ಪರಂಪರೆಯನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ‘ಭಾರತ್ ಕಿ ಲೋಕಧಾರಾ’ ಭಾರತೀಯ ಜಾನಪದ ಸಂಗೀತ ಕಾರ್ಯಕ್ರಮ ಜುಲೈ 5ರಂದು ಸಂಜೆ 5.30ಕ್ಕೆ ನಡೆಯಲಿದೆ.
ನಗರದ ಟಿಳಕವಾಡಿಯ ವ್ಯಾಕ್ಸಿನ್ ಡಿಪೊ ಆವರಣದಲ್ಲಿರುವ ಡಾ. ಪ್ರಸನ್ನಕುಮಾರ ಹಿರಿಯ ನಾಗರಿಕರ ಮನರಂಜನಾ ಕೇಂದ್ರದ ಬಯಲು ರಂಗಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಹಿಂದಿ, ಮರಾಠಿ, ಕನ್ನಡ, ತೆಲುಗು, ತಮಿಳು, ಬೆಂಗಾಳಿ, ಅಸ್ಸಾಮಿ, ಪಂಜಾಬಿ, ಗುಜರಾತಿ, ರಾಜಸ್ಥಾನಿ, ಭೋಜಪುರಿ ಹಾಗೂ ಒಡಿಯಾ ಸೇರಿದಂತೆ ವಿವಿಧ ಭಾರತೀಯ ಭಾಷೆಗಳ ಜನಪದ ಗೀತೆಗಳನ್ನು ಕಲಾವಿದರು ಪ್ರಸ್ತುತಪಡಿಸಲಿದ್ದಾರೆ. ಪ್ರಾದೇಶಿಕ ಸಂಸ್ಕೃತಿ, ಜನಪದ ವಾದ್ಯಗಳು, ನೃತ್ಯ ಮತ್ತು ಗಾಯನ ಪರಂಪರೆಯ ಸಂಗಮ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಲಿದೆ.
ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರ ಮುಂದಾಳತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿವಿಧ ರಾಜ್ಯಗಳ ಜಾನಪದ ಕಲಾ ವೈಭವವನ್ನು ಬೆಳಗಾವಿಯ ಕಲಾಸಕ್ತರಿಗೆ ಪರಿಚಯಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಸಂಗೀತ ಮತ್ತು ಜಾನಪದ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.

bottom of page