ಬೆಳಗಾವಿ ಪಾಲಿಕೆ
ಬೆಳಗಾವಿ ಪಾಲಿಕೆ

ಬೆಳಗಾವಿ:
ಒಂದು ಕಾಲದಲ್ಲಿ ನೀರಿನ ಕೊರತೆ, ಕಸದ ಸಮಸ್ಯೆ, ಹಾಳಾದ ರಸ್ತೆಗಳು, ಬೀದಿ ದೀಪಗಳ ತೊಂದರೆ, ನಾಗರಿಕ ಅಹವಾಲುಗಳಿಗೆ ತಕ್ಷಣ ಸ್ಪಂದನೆ ಇಲ್ಲದ ಪರಿಸ್ಥಿತಿಯಿಂದ ಸುದ್ದಿಯಾಗುತ್ತಿದ್ದ ವಾರ್ಡ್ ನಂ. 43 ಇಂದು ಅಭಿವೃದ್ಧಿಯ ಹೊಸ ಹೆಜ್ಜೆಗಳಿಂದ ಗಮನ ಸೆಳೆಯುತ್ತಿದೆ.
ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರ ಮಾರ್ಗದರ್ಶನದಲ್ಲಿ ಹಾಗೂ ಮಾಜಿ ಉಪಮಹಾಪೌರ, ವಾರ್ಡ್ 43ರ ಜನಪ್ರತಿನಿಧಿ ವಾಣಿ ವಿಲಾಸ ಜೋಶಿ ಅವರ ನಿರಂತರ ಪ್ರಯತ್ನದಿಂದ ಈ ವಾರ್ಡ್‌ನಲ್ಲಿ ಮೂಲಭೂತ ಸೌಕರ್ಯಗಳಿಗೆ ಹೊಸ ವೇಗ ಸಿಕ್ಕಿದೆ. ವಿಶೇಷವಾಗಿ, ದೀರ್ಘಕಾಲದಿಂದ ಜನರ ಪ್ರಮುಖ ಬೇಡಿಕೆಯಾಗಿದ್ದ 24x7 ಶುದ್ಧ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಈ ಭಾಗದ ಜನರಿಗೆ ದೊಡ್ಡ ನೆಮ್ಮದಿಯ ವಿಚಾರವಾಗಿದೆ.
ಹಿಂದೆ ಹದಿನೈದು ದಿನಕ್ಕೊಮ್ಮೆ ನೀರು ಬರುವ ಪರಿಸ್ಥಿತಿಯನ್ನು ಎದುರಿಸಿದ್ದ ನಾಗರಿಕರು, ಈಗ ನಿರಂತರ ನೀರು ಪೂರೈಕೆಯ ಭರವಸೆಯಿಂದ ಅಭಿವೃದ್ಧಿಯ ನೈಜ ಅರ್ಥವನ್ನು ಅನುಭವಿಸುತ್ತಿದ್ದಾರೆ. ನೀರು ಎಂದರೆ ಕೇವಲ ಸೌಲಭ್ಯವಲ್ಲ; ಅದು ಮಹಿಳೆಯರ ಶ್ರಮ ಉಳಿಸುವ, ಮನೆಗಳ ನೆಮ್ಮದಿ ಹೆಚ್ಚಿಸುವ, ಆರೋಗ್ಯಕರ ಜೀವನಕ್ಕೆ ಆಧಾರವಾಗುವ ಜೀವನಾಡಿ. ವಾರ್ಡ್ 43ರಲ್ಲಿ ಇದೇ ಬದಲಾವಣೆ ಜನಮನದಲ್ಲಿ ಹೊಸ ವಿಶ್ವಾಸ ಮೂಡಿಸಿದೆ.
