;
top of page
< Back

ಘಾಟ್ ರಸ್ತೆಯಲ್ಲಿ ಮಧ್ಯರಾತ್ರಿ ಮದ್ಯಸಾರ ಬೇಟೆ!

ಘಾಟ್ ರಸ್ತೆಯಲ್ಲಿ ಮಧ್ಯರಾತ್ರಿ ಮದ್ಯಸಾರ ಬೇಟೆ!

Crime

₹35 ಲಕ್ಷ ಮೌಲ್ಯದ ಮುದ್ದೇಮಾಲು
ದಾಳಿಯಲ್ಲಿ ಜಪ್ತಿಯಾದ ವಸ್ತುಗಳ ಅಂದಾಜು ಮೌಲ್ಯ ಹೀಗಿದೆ:
ಜಪ್ತಿಯಾದ ಮದ್ಯಸಾರ: ₹14,00,000
ಟ್ಯಾಂಕರ್ ಮೌಲ್ಯ: ₹21,00,000
ಮೊಬೈಲ್ ಮೌಲ್ಯ: ₹1,500
ಒಟ್ಟು ಮೌಲ್ಯ: ₹35,01,500
ಗಡಿ ಭಾಗದ ಮಾರ್ಗಗಳ ಮೇಲೆ ಕಣ್ಣಿಟ್ಟ ಅಬಕಾರಿ ಇಲಾಖೆ.
ಮುದ್ದೇಮಾಲು ವಶಕ್ಕೆ | ಚಾಲಕನಿಗೆ ನೋಟಿಸ್, ಮಾಲೀಕನ ಪತ್ತೆಗೆ ಅಬಕಾರಿ ಇಲಾಖೆ ಬಲೆ
ಬೆಳಗಾವಿ:
ಖಾನಾಪುರ ತಾಲೂಕಿನ ಜಾಂಬೋಟಿ–ಕಣಕುಂಬಿ ರಸ್ತೆಯಲ್ಲಿ ಮಧ್ಯರಾತ್ರಿ ನಂತರ ಅಬಕಾರಿ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಅಕ್ರಮ ಮದ್ಯಸಾರ ಪತ್ತೆಯಾಗಿದೆ. ಮಾರಾಟಕ್ಕಾಗಿ ಸಾಗಿಸಲಾಗುತ್ತಿದ್ದ 14 ಸಾವಿರ ಲೀಟರ್ ಸ್ಪಿರಿಟ್ ಅನ್ನು ಅಧಿಕಾರಿಗಳು ಟ್ಯಾಂಕರ್‌ ಸಮೇತ ಜಪ್ತಿ ಮಾಡಿದ್ದಾರೆ.
ಮೇ 19ರಂದು ಬೆಳಗಿನ ಜಾವ 3.45ರ ಸುಮಾರಿಗೆ ಜಾಂಬೋಟಿಯಿಂದ ಕಣಕುಂಬಿ ಕಡೆಗೆ ತೆರಳುತ್ತಿದ್ದ ಚಾಕಲೇಟ್ ಬಣ್ಣದ ಅಶೋಕ ಲೈಲ್ಯಾಂಡ್ ಆರು ಚಕ್ರದ ಟ್ಯಾಂಕರ್ ಅನ್ನು ಅಬಕಾರಿ ಅಧಿಕಾರಿಗಳು ತಡೆದು ಪರಿಶೀಲಿಸಿದರು. ಈ ವೇಳೆ ಟ್ಯಾಂಕರ್‌ನಲ್ಲಿ ಯಾವುದೇ ಕಾನೂನುಬದ್ಧ ದಾಖಲೆಗಳಿಲ್ಲದೆ 14,000 ಲೀಟರ್ ಮದ್ಯಸಾರ ಸಾಗಿಸಲಾಗುತ್ತಿರುವುದು ಬೆಳಕಿಗೆ ಬಂದಿದೆ.
ಟ್ಯಾಂಕರ್‌ನ ನೋಂದಣಿ ಸಂಖ್ಯೆ ಕೆಎ–22 ಬಿ–3793 ಆಗಿದೆ.
ಅಧಿಕಾರಿಗಳ ಮಾರ್ಗದರ್ಶನದಲ್ಲಿ ದಾಳಿ
ಡಾ. ವೈ. ಮಂಜುನಾಥ, ಅಬಕಾರಿ ಅಪರ ಆಯುಕ್ತರು, ಕೇಂದ್ರ ಸ್ಥಾನ ಬೆಳಗಾವಿ; ಎಫ್.ಎಚ್. ಚಲವಾದಿ, ಅಬಕಾರಿ ಜಂಟಿ ಆಯುಕ್ತರು, ಬೆಳಗಾವಿ ವಿಭಾಗ; ಜಗದೀಶ ಎನ್.ಕೆ., ಅಬಕಾರಿ ಉಪ ಆಯುಕ್ತರು, ಬೆಳಗಾವಿ ದಕ್ಷಿಣ ಜಿಲ್ಲೆ ಹಾಗೂ ವಿಜಯಕುಮಾರ ಜೆ. ಹಿರೇಮಠ, ಅಬಕಾರಿ ಅಧೀಕ್ಷಕರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು.
ರವಿ ಎಂ. ಮುರಗೋಡ, ಅಬಕಾರಿ ಉಪ ಅಧೀಕ್ಷಕರು, ಬೆಳಗಾವಿ ಉಪವಿಭಾಗ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಮಂಜುನಾಥ ಮೆಳ್ಳಿಗೇರಿ, ಅಬಕಾರಿ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಾಳಿಯಲ್ಲಿ ನೂರುಲ್ಲಾ ಖಾನ್, ಸುನೀಲ ಎಸ್. ಪಾಟೀಲ, ಮಂಜುನಾಥ ಬಳಗಪ್ಪನವರ, ವೈ.ಬಿ. ಪಾಟೀಲ, ಬಸವರಾಜ ವಿವೇಕಿ, ಪ್ರಕಾಶ ನಂದಿ ಹಾಗೂ ವಾಹನ ಚಾಲಕ ಸಿಬ್ಬಂದಿ ಪಾಲ್ಗೊಂಡಿದ್ದರು.

bottom of page